Philippians 3

ನಿಜವಾದ ನೀತಿ

1ಕಡೆಯದಾಗಿ ನನ್ನ ಸಹೋದರರೇ,
3:1 ಫಿಲಿ. 4:4, ಥೆಸ. 5:16
ಕರ್ತನಲ್ಲಿ ಸಂತೋಷಪಡಿರಿ.
3:1 2 ಪೇತ್ರ. 1:12
ಮೊದಲು ತಿಳಿಸಿದ ಅದೇ ಮಾತುಗಳನ್ನು ಪುನಃ ನಿಮಗೆ ಬರೆಯುವುದಕ್ಕೆ ನನಗೇನೂ ಬೇಸರವಿಲ್ಲ, ಅವುಗಳು ನಿಮ್ಮನ್ನು ಭದ್ರಪಡಿಸುವವು.
2
3:2 ಕೀರ್ತ. 22:16,20, ಯೆಶಾ. 56:10-11, ಪ್ರಕ. 22:15, ಗಲಾ. 5:15
ಆ ನಾಯಿಗಳಿಂದ ಎಚ್ಚರವಾಗಿರಿ,
3:2 2 ಕೊರಿ. 11:13
ದುಷ್ಕರ್ಮಿಗಳಿಂದ ಎಚ್ಚರಿಕೆಯಾಗಿರಿ. ಸುನ್ನತಿಯೆಂದು ಹೇಳಿಕೊಂಡು ಅಂಗಚ್ಛೇದನ ಮಾಡುವವರಿಂದ ಎಚ್ಚರಿಕೆಯಾಗಿರಿ.
3ನಿಜವಾದ ಸುನ್ನತಿಯವರು ಯಾರೆಂದರೆ,
3:3 ಯೋಹಾ 4:23, ಯೂದ. 20, ಗಲಾ. 5:25
ದೇವರಾತ್ಮನಿಂದ ಪ್ರೇರಿತರಾಗಿ ಆರಾಧಿಸುವವರೂ,
3:3 ರೋಮಾ. 15:17, ಗಲಾ. 6:14
ಕ್ರಿಸ್ತ ಯೇಸುವಿನಲ್ಲಿ ಹರ್ಷಗೊಳ್ಳುವವರೂ, ಶರೀರಸಂಬಂಧವಾದವುಗಳಲ್ಲಿ ಭರವಸವಿಲ್ಲದವರೂ ಆಗಿರುವ
3:3 ರೋಮಾ. 2:29
ನಾವುಗಳೇ.

4
3:4 2 ಕೊರಿ. 11:18
ನಾನಾದರೋ ಶರೀರಸಂಬಂಧವಾದವುಗಳಲ್ಲಿ ಭರವಸವಿಡುವುದಕ್ಕೂ ಆಸ್ಪದವಿದೆ. ಬೇರೆ ಯಾವನಾದರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಡಬಹುದೆಂದು ಯೋಚಿಸುವುದಾದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು.
5
3:5 ಆದಿ. 17:12
ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು,
3:5 2 ಕೊರಿ. 11:22
ನಾನು ಇಸ್ರಾಯೇಲ್ ವಂಶದವನು,
3:5 ರೋಮಾ. 11:1
ಬೆನ್ಯಾಮೀನನ ಕುಲದವನು,
3:5 2 ಕೊರಿ. 11:22
ಇಬ್ರಿಯರಿಂದ ಹುಟ್ಟಿದ ಇಬ್ರಿಯನು, ಧರ್ಮಶಾಸ್ತ್ರಗಳ ದೃಷ್ಟಿಯಿಂದ ನೋಡಿದರೆ
3:5 ಅ. ಕೃ. 23:6, 26:5
ನಾನು ಫರಿಸಾಯನು,

6
3:6 ಅ. ಕೃ. 8:3, 22:3-4, ಗಲಾ. 1:13-14
ಮತಾಸಕ್ತಿಯನ್ನು ನೋಡಿದರೆ ನಾನು ಕ್ರೈಸ್ತ ಸಭೆಯ ಹಿಂಸಕನು,
3:6 ವ. 9 ನೋಡಿರಿ
ಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿರ್ದೋಷಿ.
7ಆದರೆ,
3:7 ಲೂಕ. 14:33
ನನಗೆ ಲಾಭವಾಗಿದ್ದಂಥವುಗಳನ್ನು
3:7 ಇಬ್ರಿ. 11:26
ಕ್ರಿಸ್ತನ ನಿಮಿತ್ತ ನಷ್ಟವೆಂದೆಣಿಸಿದ್ದೇನೆ.

8ಇಷ್ಟೇ ಅಲ್ಲದೆ,
3:8 ಯೋಹಾ. 17:3, 2 ಪೇತ್ರ. 1:3, ಯೆಶಾ. 53:11, ಯೆರೆ. 9:23-24
ನನ್ನ ಕರ್ತನಾದ ಕ್ರಿಸ್ತಯೇಸುವನ್ನರಿಯುವುದೇ ಅತಿ ಶ್ರೇಷ್ಠವಾದದ್ದೆಂದು ತಿಳಿದು
3:8 2 ಕೊರಿ. 5:15
ನಾನು ಎಲ್ಲವನ್ನು ನಷ್ಟವೆಂದೆಣಿಸುತ್ತೇನೆ. ಆತನ ನಿಮಿತ್ತ ನಾನು ಎಲ್ಲವನ್ನೂ ಕಳೆದುಕೊಂಡು ಅವುಗಳನ್ನು ಕಸವೆಂದೆಣಿಸುತ್ತೇನೆ.
9ಇದರಲ್ಲಿ ನನ್ನ ಉದ್ದೇಶವೇನೆಂದರೆ, ನಾನು ಕ್ರಿಸ್ತನನ್ನು ಸಂಪಾದಿಸಿಕೊಂಡು,
3:9 ರೋಮಾ. 10:5, ವ. 6 ನೋಡಿರಿ
ಧರ್ಮಶಾಸ್ತ್ರದ ಫಲವಾಗಿರುವ ಸ್ವನೀತಿಯನ್ನಲ್ಲ,
3:9 ರೋಮಾ. 1:17, 3:22, 1 ಕೊರಿ. 1:30
ಕ್ರಿಸ್ತನನ್ನು ನಂಬುವುದರಿಂದ ದೊರಕುವಂಥ ಅಂದರೆ ಕ್ರಿಸ್ತನ ಮೇಲಣ ನಂಬಿಕೆಯ ಆಧಾರದಿಂದ ದೇವರು ಕೊಡುವಂಥ ನೀತಿಯನ್ನೇ ಹೊಂದಿ ಕ್ರಿಸ್ತನಲ್ಲಿರುವವನಾಗಿರಬೇಕೆಂಬುದೇ.
10
3:10 ಎಫೆ. 4:13
ಆತನನ್ನೂ
3:10 ರೋಮಾ. 1:4, 6:4, ಎಫೆ. 1:19-20
ಆತನ ಪುನರುತ್ಥಾನದಲ್ಲಿರುವ ಶಕ್ತಿಯನ್ನೂ,
3:10 1 ಪೇತ್ರ. 4:13, 2 ಕೊರಿ. 1:5
ಆತನ ಬಾಧೆಗಳಲ್ಲಿ ಪಾಲುಗಾರನಾಗಿರುವ ಪದವಿಯನ್ನೂ ತಿಳಿದುಕೊಂಡು ಆತನ ಮರಣದ ವಿಷಯದಲ್ಲಿ ಆತನಂತೆ ರೂಪಾಂತರಗೊಳ್ಳಬೇಕೆಂಬುದೇ ನನ್ನ ಬಯಕೆಯಾಗಿದೆ.
11ಹೀಗಾದರೆ
3:11 ಲೂಕ. 20:35, 1 ಕೊರಿ. 15:23, ಪ್ರಕ. 20:5-6, ಇಬ್ರಿ. 11:35
ಸತ್ತವರಲ್ಲಿ ಕೆಲವರಿಗೆ ಆಗುವ ಪುನರುತ್ಥಾನದ ಅನುಭವ ನನಗೂ ಆದೀತು.

ಬಿರುದಗಾಗಿ ಓಟ

12ಇಷ್ಟರೊಳಗೆ ನಾನಿದೆಲ್ಲವನ್ನೂ ಪಡಕೊಂಡು
3:12 ಇಬ್ರಿ. 5:9, 11:40, 12:23
ಪರಿಪೂರ್ಣತೆಗೆ ಬಂದವನೆಂದು ಹೇಳುವುದಿಲ್ಲ. ಆದರೆ ನಾನು ಯಾವುದನ್ನು ಹೊಂದುವುದಕ್ಕಾಗಿ ಕ್ರಿಸ್ತ ಯೇಸುವು ನನ್ನನ್ನು ಹಿಡಿದುಕೊಂಡನೋ ಅದನ್ನು ಹೊಂದುವುದಕ್ಕೋಸ್ಕರ ಪ್ರಯತ್ನಿಸುತ್ತಾ ಇದ್ದೇನೆ.
13ಸಹೋದರರೇ, ನಾನಂತೂ ಪಡೆದುಕೊಂಡವನೆಂದು ನನ್ನನ್ನು ಈ ವರೆಗೂ ಎಣಿಸಿಕೊಳ್ಳುವುದಿಲ್ಲ. ಆದರೆ ಒಂದು, ನಾನು
3:13 ಲೂಕ. 9:62, ಇಬ್ರಿ. 6:1
ಹಿಂದಿನ ಸಂಗತಿಗಳನ್ನು ಮರೆತುಬಿಟ್ಟು ಮುಂದಿನವುಗಳನ್ನು ಹಿಡಿಯುವುದಕ್ಕಾಗಿ ಎದೆಬೊಗ್ಗಿದವನಾಗಿ,
14ದೇವರು ಕ್ರಿಸ್ತನ ಮೂಲಕವಾಗಿ ನಮ್ಮನ್ನು ಮೇಲಕ್ಕೆ
3:14 ಇಬ್ರಿ. 3:1, 1 ಪೇತ್ರ. 5:10, ರೋಮಾ. 8:28
ಕರೆದು ನಮ್ಮ ಮುಂದೆ ಇಟ್ಟಿರುವ
3:14 1 ಕೊರಿ. 9:24, ಕೊಲೊ. 2:18
ಬಿರುದನ್ನು ಹೊಂದುವ ಗುರಿಯನ್ನು ತಲುಪಲೆಂದು ಓಡುತ್ತಾ ಇದ್ದೇನೆ.

15ನಮ್ಮಲ್ಲಿ
3:15 1 ಕೊರಿ. 2:6
ಪ್ರವೀಣರಾದವರೆಲ್ಲರೂ ಈ ವಿಷಯದಲ್ಲಿ ಇದೇ ಅಭಿಪ್ರಾಯವುಳ್ಳವರಾಗಿರಿ. ಮತ್ತು ಯಾವುದಾದರೂ ಒಂದು ವಿಷಯದಲ್ಲಿ ನೀವು ಬೇರೆ ಅಭಿಪ್ರಾಯವುಳ್ಳವರಾಗಿದ್ದರೆ ಅದನ್ನು ದೇವರು ನಿಮಗೆ ತೋರಿಸಿಕೊಡುವನು.
16ಅಂತೂ,
3:16 ಗಲಾ. 6:16
ನಾವು ಯಾವ ಸೂತ್ರವನ್ನನುಸರಿಸಿ ಇಲ್ಲಿಯ ವರೆಗೆ ಬಂದೆವೋ ಅದನ್ನೇ ಅನುಸರಿಸಿ ನಡೆಯೋಣ.

17ಸಹೋದರರೇ, ನೀವೆಲ್ಲರು ನನ್ನೊಂದಿಗೆ ಸೇರಿ
3:17 ಫಿಲಿ. 4:9, 1 ಕೊರಿ. 4:16
ನನ್ನನ್ನು ಅನುಸರಿಸುವವರಾಗಿರಿ ಮತ್ತು ನಾವು ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ.
18ಯಾಕೆಂದರೆ
3:18 2 ಕೊರಿ. 11:13
ಅನೇಕರು ಕ್ರಿಸ್ತನ ಶಿಲುಬೆಗೆ ವಿರೋಧಿಗಳಾಗಿ ನಡೆಯುತ್ತಾರೆ. ಅವರ ವಿಷಯದಲ್ಲಿ ನಿಮಗೆ ಎಷ್ಟೋ ಸಾರಿ ಹೇಳಿದೆನು, ಈಗಲೂ
3:18 ಅ. ಕೃ. 20:31
ಅಳುತ್ತಾ ಹೇಳುತ್ತೇನೆ.
19
3:19 2 ಕೊರಿ. 11:15, 2 ಥೆಸ. 1:9
ನಾಶನವೇ ಅವರ ಅಂತ್ಯಾವಸ್ಥೆ, ಹೊಟ್ಟೆಯೇ ಅವರ ದೇವರು,
3:19 2 ಕೊರಿ. 11:12, ಗಲಾ. 6:13
ನಾಚಿಕೆಪಡಿಸುವ ಕೆಲಸಗಳಲ್ಲಿಯೇ ಅವರಿಗೆ ಘನತೆ,
3:19 ರೋಮಾ. 8:5, ಕೊಲೊ. 3:2
ಅವರು ಪ್ರಪಂಚದ ಕಾರ್ಯಗಳ ಕುರಿತು ಚಿಂತಿಸುವವರು.

20
3:20 ಎಫೆ. 2:19
ನಾವಾದರೋ ಪರಲೋಕದ ಪ್ರಜೆಗಳು,
3:20 ಅ. ಕೃ. 1:11, 1 ಕೊರಿ. 1:7, ಇಬ್ರಿ. 9:28
ಕರ್ತನಾದ ಯೇಸು ಕ್ರಿಸ್ತನು ಅಲ್ಲಿಂದಲೇ ರಕ್ಷಕನಾಗಿ ಬರುವುದನ್ನು ಎದುರುನೋಡುತ್ತಾ ಇದ್ದೇವೆ.
ಆತನು
3:21 1 ಕೊರಿ. 15:28
ಎಲ್ಲವನ್ನೂ ತನಗೆ ಅಧೀನಮಾಡಿಕೊಳ್ಳಲಾಗುವ
3:21 ಎಫೆ. 1:19
ಪರಾಕ್ರಮವನ್ನು ಹೊಂದಿದವನಾಗಿ
3:21 1 ಕೊರಿ. 15:43-53
ದೀನಾವಸ್ಥೆಯುಳ್ಳ ನಮ್ಮ ದೇಹವನ್ನು
3:21 ಫಿಲಿ. 3:10, ಕೊಲೊ. 3:4, ರೋಮಾ. 8:29
ಪ್ರಭಾವವುಳ್ಳ ತನ್ನ ದೇಹದಂತೆ ರೂಪಾಂತರಪಡಿಸುವನು.

21

Copyright information for KanULB